Index   ವಚನ - 53    Search  
 
ನಿರಾಕಾರದ ಶಕ್ತಿಯಲ್ಲಿ ನಿರಾಳವೆಂಬ ತನು, ನಿಃಶೂನ್ಯವೆಂಬ ಶೂನ್ಯಸಿಂಹಾನದ ಮೇಲೆ ಘನವಾಗಿ ತೊಳಗಿ ಬೆಳಗುತ್ತಿರ್ದನು. ದೆಸೆಯಲ್ಲಾ ಮುಖವಾಗಿ, ಮುಖವೆಲ್ಲಾ ಜಗವಾಗಿ, ಅಖಂಡ ಪರಿಪೂರ್ಣ ಪರಬ್ರಹ್ಮ ತಾನಾದನು. ಈ ಮಹಿಮನ ನೆನೆದಡೆ ಮನೋಮುಕ್ತಿ, ಕಂಡಡೆ ರೂಪುಮುಕ್ತಿ, ನುಡಿಸಿದಡೆ ಶಬ್ದಮುಕ್ತಿ, ಸಂಗವ ಮಾಡಿದಡೆ ಸರ್ವಾಂಗ ಲಿಂಗೈಕ್ಯ. ಬಸವಪ್ರಿಯ ಕೂಡಲಚೆನ್ನಸಂಗಯ್ಯಾ, ನಿಮ್ಮ ಪ್ರಭುವಿನ ಶ್ರೀಪಾದಕ್ಕೆ ಶರಣೆಂದು ಬದುಕಿದೆನು.