Index   ವಚನ - 89    Search  
 
ಶ್ರೀಗುರುವಿನ ಕಾರುಣ್ಯದಿಂದ ಕರಸ್ಥಲಕ್ಕೆ ಪ್ರತ್ಯಕ್ಷವಾಗಿ, ಶಿವಲಿಂಗವ ಬಿಜಯಂಗೈಸಿ, ಸರ್ವಾಂಗವೆಲ್ಲವನು ಲಿಂಗಸ್ಪರುಶನವ ಮಾಡಿಕೊಟ್ಟ ಬಳಿಕ, ಲಿಂಗಾಂಗನೆಯರು ಹೊಲೆಗಂಡೆನೆಂದು ತೊಲಗಲಾಗದು. ಹೊಲತಿ ಲಿಂಗವ ಮುಟ್ಟಿ ಪೂಜಿಸಲಾಗದು. ಅದೆಂತೆಂದಡೆ: ಲಿಂಗಾರ್ಚನರತಾ ನಾರೀ ಸೂತಕಸ್ಯಾ ರಜಸ್ವಲಾ | ರವಿರಗ್ನಿರ್ಯಥಾ ವಾಯು ತಥಾ ಕೋಟಿಗುಣಃ ಶುಚಿ || ಮತ್ತಂ, ಪೂಜಲೋಪೋನ ಕರ್ತವ್ಯಃ ಸೂತಕೇ ಮೃತಕೇಪಿವಾ | ಜಲಬುದ್ಬುದವದ್ದೇಹಂ ತಸ್ಮಾರ್ಲ್ಲಿಂಗಂ ಸದಾರ್ಚಯೇತ್ || ಎಂದುದಾಗಿ, ಇದು ಕಾರಣ, ಅಂಗದ ಮೇಲೆ ಲಿಂಗವುಳ್ಳ ಭಕ್ತಾಂಗನೆಯರಲ್ಲಿ ಹೊಲೆಸೂತಕವ ಕಲ್ಲಿಸುವ[ವ]ರಿಗೆ ಗುರುಲಿಂಗವಿಲ್ಲವಯ್ಯಾ, ಬಸವಪ್ರಿಯ ಕೂಡಲಚೆನ್ನಸಂಗಮದೇವಾ.