Index   ವಚನ - 1    Search  
 
ಅಂಗವಳಿದು ಸುಸಂಗವಾಗಲಾಗಿ, ಸಂದೇಹಿಗಳ ಸಂದೇಹ ಬಿಟ್ಟಿತ್ತು, ನಿಸ್ಸಂದೇಹವಾಯಿತ್ತು. ಅದೆಂತೆಂದಡೆ;ತೋರುವ ತೋರಿಕೆ ತಾನೆಯಾದ ಕಾರಣ. ಸಕಲದೊಳಗಿರ್ದು ನಿಃಕಲದ ರೂಪ ನಿರ್ಧರವೆಂದು ಭಾವಿಸಿ, ಅರಿದರುಹಿಸಿಕೊಂಬವ ತಾನು ತಾನೆ, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ.