ಈ ಧರೆಯ ಮಡಕೆಯಲ್ಲಿ,
ಹೋದಬಾರಿಯ ಅಕ್ಕಿಯ ಹೊಯಿದು,
ಬಹಬಾರಿಯ ಬೆಂಕಿಯ ಹಾಕಿ,
ಅನಾಗತ ಸಂಸಿದ್ಧಿಯೆಂಬ ಒಲೆಯಲ್ಲಿ
ಉಸುರುಸಾ ಉಪ್ಫೆಂದು ಉರುಹಲಾಗಿ,
ಮಡಕೆ ಒಡೆದು, ಓಗರ ಬೆಂದಿತ್ತು.
ಉಂಬ ಅಣ್ಣ ಓಗರವನೊಲ್ಲದೆ
ಗಂಜಿಯ ಕುಡಿದು ಗಂಟಲು ಸಿಕ್ಕಿತ್ತು,
ಸಗರದ ಬೊಮ್ಮನೊಡೆಯ ತನುಮನ
ಸಂಗಮೇಶ್ವರಲಿಂಗಾ.
Art
Manuscript
Music
Courtesy:
Transliteration
Ī dhareya maḍakeyalli,
hōdabāriya akkiya hoyidu,
bahabāriya beṅkiya hāki,
anāgata sansid'dhiyemba oleyalli
usurusā upphendu uruhalāgi,
maḍake oḍedu, ōgara bendittu.
Umba aṇṇa ōgaravanollade
gan̄jiya kuḍidu gaṇṭalu sikkittu,
sagarada bom'manoḍeya tanumana
saṅgamēśvaraliṅgā.