ಉದಕದ ಕೈಯ ಕರಗದಲ್ಲಿ ಬೆಂಕಿಯ ಸುಜಲವ ತುಂಬಿ,
ಆರಂಗ ಮೂರಂಗನ ಕೂಡೆ ನಿಂದುದೆ ಮಜ್ಜನ ಪಾತ್ರೆ.
ತೋರಲಿಲ್ಲದ ಪದಾರ್ಥವ
ಘನಮುಕ್ತಿಯೆಂಬ ಕೈಯಿಂದ
ನಿಮಗರ್ಪಿತವ ಮಾಡುವೆನಯ್ಯಾ.
ಸಗರದ ಬೊಮ್ಮನೊಡೆಯ
ಎನ್ನ ತನುಮನ ಅಂಗಲಿಂಗವಸ್ತು
ನಿಮಗರ್ಪಿತವಯ್ಯಾ.
Art
Manuscript
Music
Courtesy:
Transliteration
Udakada kaiya karagadalli beṅkiya sujalava tumbi,
āraṅga mūraṅgana kūḍe nindude majjana pātre.
Tōralillada padārthava
ghanamuktiyemba kaiyinda
nimagarpitava māḍuvenayyā.
Sagarada bom'manoḍeya
enna tanumana aṅgaliṅgavastu
nimagarpitavayyā.