ಗುರಿ ಒಂದಕ್ಕೆ ಧನು ಮೂರು, ಸರ ಹದಿನಾರು.
ಒಂದೆ ಬಿಡುಮುಡಿಯಲ್ಲಿ ಎಸಲಿಕ್ಕೆ,
ಗುರಿತಪ್ಪಿ ಎಚ್ಚವನಂಗ ಬಟ್ಟಬಯಲಾಯಿತ್ತು,
ಅದು ತಪ್ಪಿಹೋದ ಕಾರಣ,
ಸಗರದ ಬೊಮ್ಮನೊಡೆಯ ತನುಮನ
ಸಂಗಮೇಶ್ವರಲಿಂಗವೆ ಗುರಿ,
ಅರಿವ ಮನ ಸರವಾದ ಕಾರಣ.
Art
Manuscript
Music
Courtesy:
Transliteration
Guri ondakke dhanu mūru, sara hadināru.
Onde biḍumuḍiyalli esalikke,
guritappi eccavanaṅga baṭṭabayalāyittu,
adu tappihōda kāraṇa,
sagarada bom'manoḍeya tanumana
saṅgamēśvaraliṅgave guri,
ariva mana saravāda kāraṇa.