Index   ವಚನ - 43    Search  
 
ಜೀವವಳಿದು ಪರಮನಾಗಬೇಕೆಂಬರು: ಜೀವವೆಲ್ಲಿ ಅಳಿವುದು? ಪರಮನೆಲ್ಲಿ ಅಹುದು? ಅಳಿವುದು ಬೇರೊಂದು. ಈ ಉಭಯದ ಅಳಿವ ಉಳಿವ ಮನೆಯ ಹೇಳಾ, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ.