ತನು ನಷ್ಟವಾದಲ್ಲಿ, ಉಸುರಿಗೆ ಒಡಲಿಲ್ಲ.
ಮನ ನಷ್ಟವಾದಲ್ಲಿ, ಅರಿವಿಂಗೆ ತೆರಪಿಲ್ಲ.
ಅರಿವು ನಷ್ಟವಾದಲ್ಲಿ, ಉಭಯವ
ಭೇದಿಸುವದಕ್ಕೆ ಅಪ್ರಮಾಣು.
ರೂಪು ರುಚಿ ದೃಷ್ಟವಾಗಬೇಕು,
ಸಗರದ ಬೊಮ್ಮನೊಡೆಯ
ತನುಮನ ಸಂಗಮೇಶ್ವರಾ?
Art
Manuscript
Music
Courtesy:
Transliteration
Tanu naṣṭavādalli, usurige oḍalilla.
Mana naṣṭavādalli, ariviṅge terapilla.
Arivu naṣṭavādalli, ubhayava
bhēdisuvadakke apramāṇu.
Rūpu ruci dr̥ṣṭavāgabēku,
sagarada bom'manoḍeya
tanumana saṅgamēśvarā?