ತನುವಿನೊಳಗಣ ತನುವಿನಲ್ಲಿ ಕೂಡಿದವನಾರೊ?
ಮನದೊಳಗಣ ನೆನಹಿನಲ್ಲಿ ನೆನೆಹಿಸಿಕೊಂಬವನಾರೊ?
ಬಾಯೊಳಗಣ ಬಾಯಲ್ಲಿ ಉಂಬವನಾರೊ?
ಕಣ್ಣಿನೊಳಗಣ ಕಣ್ಣಿನಲ್ಲಿ ನೋಡುವನಾರೊ?
ನಾ ನೀನೆಂಬಲ್ಲಿ ಅದೇನು ಹೇಳಾ,
ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ.
Art
Manuscript
Music
Courtesy:
Transliteration
Tanuvinoḷagaṇa tanuvinalli kūḍidavanāro?
Manadoḷagaṇa nenahinalli nenehisikombavanāro?
Bāyoḷagaṇa bāyalli umbavanāro?
Kaṇṇinoḷagaṇa kaṇṇinalli nōḍuvanāro?
Nā nīnemballi adēnu hēḷā,
sagarada bom'manoḍeya tanumana saṅgamēśvarā.