Index   ವಚನ - 51    Search  
 
ನಾನಾಕೋಶವಾಸ ಕಳಾಧರ ಸಮಖಂಡನ ದಿಗ್ವಳಯ ರಣಭೂಮಿಯಲ್ಲಿ ಒಂದು ಅರಿದ ತಲೆ ಬಂದಿತ್ತು. ಪಂಚಾಶತಕೋಟಿ ವಿಸ್ತೀರ್ಣದವರಿಗೆ ಮುಂಡವಿಲ್ಲದೆ ಬಂದೆನೆಂದು ಹೇಳುತ್ತಿದೆ. ಮುಂಡ ತಲೆಯೊಳಡಗಿ, ತಲೆ ಮುಂಡವೆರಡೂ ಒಂದೆಲೆಯೊಳಗಡಗಿತ್ತು. ಆ ಎಲೆಗೆ ತೊಟ್ಟು, ಮೊನೆ ನಾರಿಲ್ಲಾ ಎಂದು, ನಾ ಬಂದೆ ಹೊಂದಿದೆನೆಂದು ನಸುನಗುತ್ತಿದ್ದಿತ್ತ