ಪಾತಾಳಲೋಕದಲ್ಲಿ ಪಾದವಿಲ್ಲದ ಪಕ್ಷಿ ಹುಟ್ಟಿತ್ತು.
ಅದು ಅನೇಕ ವರ್ಣ, ಬಹುಕೃತ ವೇಷ.
ರಟ್ಟೆಯಿಲ್ಲದೆ ಹಾರುವುದು, ಕೊಂಬಿನ ಮೇಲೆ ಇರದು.
ಆಕಾಶದಲ್ಲಿ ಆಡುವುದು, ಭೂವಳಯದಲ್ಲಿ ಬಳಸಿ ಬಪ್ಪುದು.
ವಿಹಂಗನ ಗುಣವಹುದು, ಪಕ್ಷಿಯ ಜಾತಿ ಗೋತ್ರವಿಲ್ಲ.
ಪಕ್ಷಿಯೆಂಬುದಕ್ಕೆ ಮೊದಲೇ ಹಾರಿ ಹೋಯಿತ್ತು.ಎತ್ತಲೆಂದರಿಯೆ,
ಸಗರದ ಬೊಮ್ಮ