Index   ವಚನ - 57    Search  
 
ಬಂಗಾರವನೊರೆದು ಬಣ್ಣವ ಕಾಣಬೇಕಲ್ಲದೆ, ಬಣ್ಣವನೊರೆದು ಬಂಗಾರದ ಇರವನರಿಯಬಹುದೆ? ಜೀವವರಿದು ಜ್ಞಾನವ ಕಾಣಬೇಕಲ್ಲದೆ ಜೀವವಳಿದು ಜ್ಞಾನಕ್ಕೆ ಉಳಿವುಂಟೆ? ಅದು ಜ್ಯೋತಿಯ ಮೇಲಣ ತಮವದೆ, ಕೆಳಗೆ ಬೆಳಗು, ತುದಿಯಲ್ಲಿ ಸಮವದೆ ತಿಳಿದು ನೋಡಿ. ಆ ಪರಿಯ ಇರವು ಜೀವಪರಮನ ಕಲೆ, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗಾ.