Index   ವಚನ - 68    Search  
 
ಮನೆ ಬೇಕಾದಡೆ ಮನೆಯ ಸುಡು. ಮಣ್ಣು ಬೇಕಾದಡೆ ಒಲ್ಲದಿರು. ಹೊನ್ನು ಬೇಕಾದಡೆ ಹಿಡಿಯದಿರು. ಹೆಣ್ಣು ಬೇಕಾದಡೆ ಕೂಡದಿರು. ಹಸಿವಿಲ್ಲದಡುಣ್ಣು, ಈ ಹುಸಿಯ ದಿಟ ಮಾಡು, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗವನರಿಯಬಲ್ಲಡೆ.