Index   ವಚನ - 1    Search  
 
ಘೃತ ಘೃತವ ಬೆರಸಿದಂತೆ ನಿಮ್ಮ ಶ್ರೀಪಾದವ ಬೆರಸಿದನಯ್ಯಾ ಬಸವಣ್ಣ. ಕ್ಷೀರ ಕ್ಷೀರವ ಬೆರಸಿದಂತೆ ನಿಮ್ಮ ಶ್ರೀಪಾದವ ಬೆರಸಿದನಯ್ಯಾ ಚೆನ್ನಬಸವಣ್ಣ. ಜ್ಯೋತಿ ಜ್ಯೋತಿಯ ಬೆರಸಿದಂತೆ ನಿಮ್ಮ ಶ್ರೀಪಾದವ ಬೆರಸಿದನಯ್ಯಾ ಪ್ರಭು[ದೇವ]. ಬಯಲು ಬಯಲ ಬೆರಸಿದಂತೆ ನಿಮ್ಮ ಶ್ರೀಪಾದವ ಬೆರಸಿದನಯ್ಯಾ ಮಡಿವಾಳಯ್ಯ. ಬೆಳಗು ಬೆಳಗ ಬೆರಸಿದಂತೆ ನಿಮ್ಮ ಶ್ರೀಪಾದವ ಬೆರಸಿದನಯ್ಯಾ ಸಿದ್ಧರಾಮಯ್ಯ. ಇವರು ಮುಖ್ಯವಾದ ಏಳ್ನೂರೆಪ್ಪತ್ತಮರಗಣಂಗಳ ಶ್ರೀಪಾದದಲ್ಲಿ ಉರಿ ಕರ್ಪುರ ಬೆರಸಿದಂತೆ ಬೆರಸಿದೆನಯ್ಯಾ, ಭಕ್ತಿಪ್ರಿಯ ಸತ್ಯಕರಂಡಮೂರ್ತಿ ಸದಾಶಿವಲಿಂಗವೆ.