ದೇವರದೇವ ನೀನೆಂದೆನಿಸಿಕೊಂಡೆ
ಬಾಣನ ಬಾಗಿಲ ಕಾಯ್ವರೇನಯ್ಯಾ ?
ನಿತ್ಯತೃಪ್ತ ನೀನೆನಿಸಿಕೊಂಡೆ,
ಚೆನ್ನನ ಮನೆಯಲುಂಬರೇನಯ್ಯಾ ?
ಕರುಣಾಕರ ನೀನೆಂದೆನಿಸಿಕೊಂಡೆ,
ಸಿರಿಯಾಳನ ಮಗನ ಬೇಡುವರೇನಯ್ಯಾ ?
ನಿಮ್ಮ ಮಹಿಮೆಯ ನೀವೆ ಬಲ್ಲಿರಿ,
ಎನ್ನನುದ್ಧರಿಸಯ್ಯಾ ಶಂಭುಜಕ್ಕೇಶ್ವರಾ.
Art
Manuscript
Music
Courtesy:
Transliteration
Dēvaradēva nīnendenisikoṇḍe
bāṇana bāgila kāyvarēnayyā?
Nityatr̥pta nīnenisikoṇḍe,
cennana maneyalumbarēnayyā?
Karuṇākara nīnendenisikoṇḍe,
siriyāḷana magana bēḍuvarēnayyā?
Nim'ma mahimeya nīve balliri,
ennanuddharisayyā śambhujakkēśvarā.