Index   ವಚನ - 35    Search  
 
ಅಟ್ಟಿಮುಟ್ಟಿ ಆತುರದಿಂದ ಹಿಡಿದು ಮುಟ್ಟಿ ನಂಬಲರಿಯದ ಕಷ್ಟರನೇನೆಂಬೆನಯ್ಯಾ. ನಿಶ್ಚಯವಿದೆ ಲಿಂಗ; ಸತ್ಯವಿದೆ ಪ್ರಸಾದ; ಪ್ರಸಿದ್ಧವಿದೆ ಜಂಗಮ; ಇನಿತನರಿಯದವರ ಹೊದ್ದಿಸದಿರಯ್ಯ ಎನ್ನತ್ತಲಿ, ಕಪಿಲಸಿದ್ಧಮಲ್ಲಿಕಾರ್ಜುನಾ.