Index   ವಚನ - 65    Search  
 
ಅಯ್ಯಾ, ಕರಣ ಕಂಬನಿಯ ದೆಸೆಗೆಟ್ಟ ವಾರಿಧಿಯೊಳಗೆ ಮುಸುಕಿ ಮುಸುಕಿ ಮೋಹಿಸುತಿದ್ದೆ. ಅಯ್ಯಾ, ದೆಸೆಗೆಟ್ಟ ಪಶುವಾನು ಪಶುಪಾಶಮೋಚನ ಹಸುಳೆಯ ನಿನ್ನ ವಶಕ್ಕೆ ತೆಗೆದೆತ್ತ ಬಾ ಎನ್ನ ಕರುಣಿ ಕಪಿಲಸಿದ್ಧಮಲ್ಲಿಕಾರ್ಜುನ.