ವಚನ - 79     
 
ಅಯ್ಯಾ, ನಿನ್ನ ವಿಕಳತೆಯಿಂದ ಹಾಹಾ! ಭೂತನಾದೆ. ಅಯ್ಯಾ, ನಿನ್ನ ನೆನಹಿನ ಧ್ಯಾನದಿಂದ ಮೂರ್ಛೆಹೋದೆ. ಅಯ್ಯಾ, ನಿನ್ನ ಭಕ್ತಿತ್ರಯದಿಂದ ಶುದ್ಧ ಮುಕ್ತನಾದೆನಯ್ಯಾ. ತಾತ್ಪರ್ಯದಲ್ಲಿ ಶುದ್ಧಾತ್ಮನಾಗಿ ನಿನ್ನ ಭಕ್ತಿರತಿಯಲ್ಲಿ ಸಂಪನ್ನನಾದೆ, ಕಪಿಲಸಿದ್ಧಮಲ್ಲಿಕಾರ್ಜುನಾ.