Index   ವಚನ - 84    Search  
 
ಅಯ್ಯಾ, ನಿಮ್ಮವರ ಕಂಡಡೆ ನೀವೆಂದೆ ನಂಬುವ ನಂಬುಗೆಯ ಕರುಣಿಸಯ್ಯಾ. ಅಯ್ಯಾ ನಿಮ್ಮವರ ವಾಕ್ಯವ ಕೇಳಿದಡೆ, ನಿಮ್ಮ ವಾಕ್ಯವೆಂದೆ ನಂಬುವ ನಂಬುಗೆಯ ಕರುಣಿಸಯ್ಯಾ. ಅಯ್ಯಾ, ನಿಮ್ಮವರ ಕೀಳಿಲ ಕಾಯ್ದುಕೊಂಡಿಪ್ಪೆನಯ್ಯಾ. ಎನ್ನ ಮಾನಸ - ವಾಚಕ - ಕಾಯಕಕ್ಕೆ ಇದನೆ ಕರುಣಿಸಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ, ನಿಮ್ಮ ಧರ್ಮ.