ವಚನ - 87     
 
ಅಯ್ಯಾ, ನಿಮ್ಮ ಹಾಡಿ ಹಂಬಲಿಸಿದೆನಯ್ಯಾ. ನಿಮ್ಮ ಬೇಡಿ ಬೇಡಿ ಬಾಯಿ ಬೋಡಾದೆನಯ್ಯಾ. ನುಡಿಗೆಟ್ಟ ಬ್ರಹ್ಮದಲ್ಲಿ ನಡೆದಹೆನೆಂದಡೆ ಎನ್ನೊಡಲಾಮಿಷ ಕಾಡುತ್ತಿವೆ. ಮೃಡನೆ, ಕಪಿಲಸಿದ್ಧ ಮಲ್ಲಿಕಾರ್ಜುನಯ್ಯ. ಇವನೆಲ್ಲವ ಕಳೆದು ನಿಮ್ಮದೊಂದು ಭಕ್ತಿಯ ಕರುಣಿಸಯ್ಯಾ, ತಂದೆ!