ಅಯ್ಯಾ, ನಿಮ್ಮಾಜ್ಞೆಯಲ್ಲಿಪ್ಪವು
ಕಂಡಾ ಸಕಲ ಲೋಕಂಗಳು;
ಅಯ್ಯಾ, ನಿಮ್ಮಿಚ್ಛಾಮಾತ್ರದಲ್ಲಿಪ್ಪರು ಕಂಡಾ
ಕೋಟಿ ಹರಿವಿರಿಂಚ್ಯಾದಿಗಳು;
ಅಯ್ಯಾ, ನಿಮ್ಮ ಮೀರಿದಾಧಿಕ್ಯವೊಂದೂ ಇಲ್ಲ.
ಎಲೆ ಅಯ್ಯಾ, ಸಮಸ್ತ ಬ್ರಹ್ಮಾಂಡಗಳು,
ನಿಮ್ಮ ರೋಮಕೂಪದಲ್ಲಿಪ್ಪವು.
ಉರುತರ ಶಿವನೆ! ನಿಮ್ಮನರಿಯದೆ
ಏಕೆ ಕೆಡುವರಯ್ಯಾ ನರರು,
ಕಪಿಲಸಿದ್ಧಮಲ್ಲಿಕಾರ್ಜುನಾ.
Art
Manuscript
Music Courtesy:
Video
TransliterationAyya, nim'mājñeyallippavu
kaṇḍa sakala lōkaṅgaḷu;
ayyā, nim'micchāmātradallipparu kaṇḍā
kōṭi harivirin̄cādigaḷu;
ayyā, nim'ma mīridādhikyavondū illa.
Ele ayya, samasta brahmāṇḍagaḷu,
nim'ma rōmakūpadallippavu.
Urutara śivane! Nim'manariyade
ēke keḍuvarayya nararu,
kapilasid'dhamallikārjunā.