ವಚನ - 96     
 
ಅಯ್ಯಾ, ಬಾರಯ್ಯಾ, ಅಯ್ಯಾ, ನೀ ಬಂದು ಅನಾಹತಜ್ಞಾನದಲ್ಲಿ ಅನುದಿನ ಪ್ರವೇಶಿಸಾ. ಎಲೆ ಅಯ್ಯಾ, ನಿನ್ನ ಧರ್ಮ. ಅಯ್ಯಾ, ಅನ್ಯರಿಗೆ ಕೈಯಾನಲಾರೆ. ಅಯ್ಯಾ, ಅನ್ಯರಿಗೆ ಅಣ್ಣಾ ಎನಲಾರೆ. ಅಯ್ಯಾ, ನಿನ್ನವ ನಾನಿದ್ದು, ಅನ್ಯರನು ಆಶ್ರಯಿಸುವ ಅನ್ಯಾಯ ನಿನ್ನದು ಕಾಣಾ ಕಪಿಲಸಿದ್ಧಮಲ್ಲಿಕಾರ್ಜುನಾ.