•  
  •  
  •  
  •  
Index   ವಚನ - 179    Search  
 
ಆನು-ನೀನು ಎಂಬ ಭೇದವುಳ್ಳನ್ನಬರ ಎಂತಪ್ಪುದಯ್ಯಾ ಶಿವಭಕ್ತಿ? ಸಂದು ಸಂಶಯ ಒಂದಾಗದನ್ನಕ್ಕರ ಎಂತಪ್ಪುದಯ್ಯಾ ಸಮಯಭಕ್ತಿ? ಆಯತರಲ್ಲದೆ ಸ್ವಾಯತರಲ್ಲ, ಸ್ವಾಯತರಲ್ಲದೆ ಸಂಬಂಧಿಗಳಲ್ಲ, ಸಂಬಂಧಿಗಳಿಗಲ್ಲದೆ ಸದಾಚಾರವಿಲ್ಲ, ಸದಾಚಾರಿಗಳಿಗಲ್ಲದೆ ಸ್ವಾನುಭಾವವಿಲ್ಲ, ಸ್ವಾನುಭಾವಿಗಳಿಗಲ್ಲದೆ ನೀ ಸಿಕ್ಕೆ. ಸೂರೆಯೆ ಎಲ್ಲರಿಗೆ ಸದಾಚಾರದ ಮಾತು? ಸೂರೆಯೆ ಎಲ್ಲರಿಗೆ ಗಣಾಚಾರದ ಮಾತು? ಸೂರೆಯೆ ಎಲ್ಲರಿಗೆ ಕಪಿಲಸಿದ್ದಮಲ್ಲಿಕಾರ್ಜುನಯ್ಯಾ, ನಿಮ್ಮ ಶರಣ ಬಸವಣ್ಣಂಗಲ್ಲದೆ.
Transliteration Ānu-nīnu emba bhēdavuḷḷannabara entappudayyā śivabhakti? Sandu sanśaya ondāgadannakkara entappudayyā samayabhakti? Āyatarallade svāyataralla, svāyatarallade sambandhigaḷalla, sambandhigaḷallade sadācāravilla, sadācārigaḷigallade svānubhāvavilla, svānubhāvigaḷallade nī sikke. Sūreye ellarigū sadācārada mātu? Sūreye ellarigū gaṇācārada mātu? Sūreye ellarige kapilasiddamallikārjunayya, nim'ma śaraṇa basavaṇṇaṅgallade.