ವಚನ - 192     
 
ಆಯಿತ್ತಾಯಿತ್ತು ಮನದಂತೆ ಮಂಗಳ; ಆಯಿತ್ತಾಯಿತ್ತು ನೆನೆದಂತೆ ಕುರುಹು; ಆಯಿತ್ತಾಯಿತ್ತು ಸೀಮೆಯಳವಟ್ಟ ಸಂಬಂಧ; ಆಯಿತ್ತಾಯಿತ್ತು ಸ್ವಾನುಭಾವ ಸ್ವಯವಾದ ದೀಕ್ಷೆ; ಆಯಿತ್ತಾಯಿತ್ತು ಕಪಿಲಸಿದ್ಧಮಲ್ಲಿಕಾರ್ಜುನಾ ನಿಮ್ಮಲ್ಲಿ ಸಂದು ಸವೆದು ಒಂದಾದ ನಿರ್ವಾಣವು.