Index   ವಚನ - 193    Search  
 
ಆಯಿಸ ಬಗುಸೆಯ ಬಲವು ತಮಗಿಲ್ಲ ಕೇಳಿರಣ್ಣಾ. ತಮ್ಮ ಬಲ ಅವಕುಂಟು ಕೇಳಿರಣ್ಣಾ. ಆಯಿಸ ತನಗಿನಿಸೆಂಬುದಿಲ್ಲ ಕಾಣಿರಣ್ಣಾ. ಬಗುಸೆ ತನಗಿನಿಸೆಂಬುದಿಲ್ಲ ಕಾಣಿರಣ್ಣಾ. ಕೇಳಿರಣ್ಣಾ, ಅಣ್ಣಾ, ಅಣ್ಣಾ ಕೇಳಿರಣ್ಣಾ. ಕಪಿಲಸಿದ್ಧಮಲ್ಲಿನಾಥಯ್ಯ ನಿಸ್ಸೀಮ ಕೇಳಿರಣ್ಣಾ.