ವಚನ - 195     
 
ಆರನಾದಡೆಯೂ ಅಣ್ಣಾ ಎನಲಾರೆನು ಆರನಾದಡೆಯೂ ಅಯ್ಯಾ ಎನಲಾರೆನು, ನೀನು ಜಗಕೊಡೆಯ, ನಾನು ನಿನ್ನ ಅಯ್ಯಾ ಎಂಬೆನು. ಎನಗಾರೂ ಇಲ್ಲದ ಕಾರಣ, ನೀವೆ ಗತಿ ಶರಣುಹೊಕ್ಕೆ, ಕರುಣಿಸು ಕಪಿಲಸಿದ್ಧಮಲ್ಲಿಕಾರ್ಜುನಾ.