Index   ವಚನ - 223    Search  
 
ಆವುದರಲಾದಡೇನು ನೀನು? ನೀನು ಮಹಾಸಮರ್ಥನಯ್ಯಾ. ಧನದಲ್ಲಿ ಗುಣದಲ್ಲಿ ಹೆಂಪಿನ ಹೆಸರಲಿ ಹಿರಿಯನು ನೀನಯ್ಯಾ. ಅಯ್ಯಾ, ನೀನೆಲ್ಲರಲ್ಲಿ ಸಂಪನ್ನನಯ್ಯಾ, ಎನ್ನ ಕಪಿಲಸಿದ್ಧಮಲ್ಲೇಶ್ವರದೇವರ ದೇವ.