•  
  •  
  •  
  •  
Index   ವಚನ - 239    Search  
 
ಇಚ್ಛೆಯಲ್ಲಿ ನಡೆವ ಅಚ್ಚಿಗಬಡುವ ತುಚ್ಛರಿಗೆ ಎಂತಪ್ಪುದಯ್ಯ ಶಿವಭಕ್ತಿ? ಸಾಕ್ಷಾತ್ ಇದು ನಿಶ್ಚಯವೆಂದರಿದು ನಂಬದನ್ನಬರ ಮಾತಿನ ಬೂತುಗಳಿಗೆ, ಭ್ರಾಂತುಳ್ಳ ಚಿತ್ತರಿಗೆ ನಿತ್ಯ ಶಿವಭಕ್ತಿ ಎಂತಪ್ಪುದಯ್ಯಾ ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Iccheyalli naḍeva accigabaḍuva tuccharige entappudayya śivabhakti? Sākṣāt idu niścayavendaridu nambadannabara mātina būtugaḷige, bhrāntuḷḷa cittarige nitya śivabhakti entappudayyā kapilasid'dhamallikārjunā.