•  
  •  
  •  
  •  
Index   ವಚನ - 281    Search  
 
ಎಂದಪ್ಪುದಯ್ಯಾ ಶಿವಭಕ್ತಿರಸ? ಎನಗೆಂದಪ್ಪುದಯ್ಯಾ ನಿಮ್ಮ ಕರುಣ? ಕ್ರಿಯಾಕಾರಕ್ಕೆ ತಾನೆ ಮೂಲಿಗನಾದೆ. ಮೊದಲುಗೆಟ್ಟೆನು ಶುದ್ಧಮೂಲದಲ್ಲಿ. ನಿರ್ವಾಣದೀಕ್ಷೆಯಲಿ ಒಯ್ಯನೆ ಮುಖದೋರೆ ಅಯ್ಯಾ ನೀನೆಯ್ದಿಕೊ ಮನ ಮಧ್ಯವ. ಮಥನದಲಿ ಸಂಗಮಿಸಿ ಯಥಾ ಕಥನಕ್ಕೆ ತಾನಾಗಿ ಸದಮಳ ಜ್ಞಾನಕ್ಕೆ ಮಾತೆಯಾಗಿ ಅತಿಶಯದ ರೂಪ ನಿನ್ನ ನೆನಹಿನ ನಿರ್ಮಳದಲ್ಲಿ ಲೀಯ್ಯವಾದೆ ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Endappudayyā śivabhaktirasa? Enagendappudayyā nim'ma karuṇa? Kriyākārakke tāne mūliganāde. Modalugeṭṭenu śud'dhamūladalli. Nirvāṇadīkṣeyali oyyane mukhadore ayyā nīneydiko mana madhyava. Mathanadali saṅgamisi yathā kathanakke tānāgi sadamaḷa jñānakke māteyāgi atiśayada rūpa ninna nenahina nirmaladalli līyyavāde kapilasid'dhamallikārjunā.