Index   ವಚನ - 284    Search  
 
ಎಣಿಕೆಯಿಲ್ಲದ ಘನವೆನ್ನ ಕಣ್ಣ ಮುಂದೆ ತೋರುತ್ತಿದೆ, ಎಲೆ ಅಯ್ಯಾ. ಇದ ಕಂಡು ಮನಕ್ಕೆ ಸಂತಸವಾಯಿತ್ತಯ್ಯಾ. ಎಣಿಕೆಯಿಲ್ಲದ ಘನವ ಕರುಣಿಸಿದಡಾನು ಬದುಕುವೆನಯ್ಯಾ, ಕಪಿಲಸಿದ್ಧಮಲ್ಲಿನಾಥಯ್ಯಾ.