ವಚನ - 293     
 
ಎನ್ನ ಪಾತಕಜನ್ಮವ ಕಳೆದಿರಿ. ಎನ್ನ ಭೂತಪ್ರಾಣವನುಳಿದು ಲಿಂಗಪ್ರಾಣಿಯ ಮಾಡಿದಿರಿ. ಎನ್ನ ನಿಮ್ಮ ಶರಣರ ಸಂಗಕ್ಕೆ ಸಲಿಸಿದಿರಿ. ಭವಿಯ ಮನೆಯನ್ನಪಾನ [ಪಿಶಿತ] ಸುರಪಾನವೆಂದೆಂಬೆ. ಎನ್ನದಿದ್ದೆನಾದಡೆ ನಾಯಕನರಕ, ನಿಮ್ಮಾಣೆ, ಕಪಿಲಸಿದ್ಧಮಲ್ಲಿಕಾರ್ಜುನಾ.