ವಚನ - 304     
 
ಎಮ್ಮ ನೋವೆ ನೋವು ನಿಮಗೆ, ಎಮ್ಮ ಸುಖವೆ ಸುಖವು ನಿಮಗೆ, ಮತ್ತೆ ನಿಮ್ಮುವ ತೋರೆಯಯ್ಯಾ. ನೀನು ಕರಕರಸೂಕ್ಷ್ಮನು. ಸೂಕ್ಷ್ಮದಲ್ಲಿ ತಿಮಿರ ಹೂಸಿ ಬೆರಸಿ ನೋಡು ನೋಡೆಂಬೆನಯ್ಯಾ. ನಾ ಕಾಣಿಸಲಿಕಾರೆನಯ್ಯಾ; ನೀ ಬೆರಸಿ ಬೆರಸಿ ಒಲ್ಲೆನೆ. ಎನ್ನ ಕಪಿಲಸಿದ್ಧಮಲ್ಲಿನಾಥಾ, ನೀ ಶೂನ್ಯನಯ್ಯಾ.