ವಚನ - 466     
 
ಕೇಳವ್ವಾ, ಕೇಳವ್ವಾ ಕೆಳದಿ ಹೇಳುವೆ ನಿನಗೆ: ಆಹಾ! ಕಂಗಳಲ್ಲಿ ಕಾಬೆ, ಮತ್ತೆ ಕಾಣೆ! ಮನದಲ್ಲಿ ಹಿಡಿವೆ, ಹಿಡಿದು ಮತ್ತೆ ಕಾಣೆನವ್ವಾ! ಮಿಂಚಿನ ರವೆರವೆಯಂತೆ ತೋರುವನಡಗುವ, ನಮ್ಮ ಕಪಿಲಮಲ್ಲಿನಾಥದೇವನು!