ಕೋಗಿಲ ಶಬ್ದ ಕಿವಿಗೆ ಕೂಗಿ ಹೋಯಿತ್ತು
ಕಂಡ ಕಂಡ ಪುರುಷನನಪ್ಪಲು
ಅಪ್ಪಿನ ಸುಖ ಸಂತಾನವಾಯಿತ್ತೆನಗೆ.
ಅಪ್ಪಿನ ಸುಖದ ಸಂತಾನದ ಬಗೆಯ ಕೇಳಲು
ಕರಣಿಕ ಹೇಳಿದನಯ್ಯಾ ಮೂವತ್ತಾರು ಕುಮಾರರನು.
ಆ ಕುಮಾರನ ಕೂಟದಲ್ಲಿರಲು,
ಹೆತ್ತ ಮಕ್ಕಳ ಕೂಟವೆಂದಡೆ,
ಹುಟ್ಟಿದರಯ್ಯಾ, ಇನ್ನೂರ ಹದಿನಾರು ರಾಜಕುಮಾರರು.
ಆ ಕುಮಾರರ ಚೆಲುವಿಕೆಯ ಕಂಡು,
ಆ ಚೆಲುವಿಕೆಯ ಮಕ್ಕಳ ನೆರೆಯಲು
ಪತಿವ್ರತೆಯೆನಿಸಿಕೊಂಡು, ಒಬ್ಬನೆ ಪುರುಷನೆಂದಳಯ್ಯಾ
ಕಪಿಲಸಿದ್ಧಮಲ್ಲಿನಾಥಯ್ಯಾ, ನಿಮ್ಮ ಹೆಂಡತಿ.