ವಚನ - 486     
 
ಗುರುಪಾದೋದಕದಿಂದ ಲಿಂಗಮಜ್ಜನ ಮಾಡುವೆನೆಂಬ ಭಾಷೆ ಎನ್ನದಯ್ಯಾ. ಗುರುಪಾದೋದಕದಿಂದ ಸ್ವಯಂಪಾಕರಚನೆ ಎಂಬ ಭಾಷೆ ಎನ್ನದಯ್ಯಾ. ಗುರುಪಾದೋದಕದಿಂದ ಶಿರಃಸ್ನಾನ, ಅಂಗಸ್ನಾನ, ಮುಖಸ್ನಾನ ಎಂಬ ಭಾಷೆ ಎನ್ನದಯ್ಯಾ. ಗುರುಪಾದೋದಕದಿಂದ ಸರ್ವಶುದ್ಧ ಎಂಬ ಭಾಷೆ ಎನ್ನದಯ್ಯಾ. ಇದು ಕಾರಣ, ಗುರುವೆ ಘನವೆಂದು, ಗುರುಪಾದೋದಕವೆ ಎನ್ನ ಮೋಕ್ಷದ ಬೀಡೆಂದು ಡಂಗುರ ಹೊಯ್ವೆ. ಇದು ಕಿಂಚಿತ್ ಹುಸಿಯಾದಡೆ ಕಪಿಲಸಿದ್ಧಮಲ್ಲಿಕಾರ್ಜುನ ನಾಯಕನರಕದಲ್ಲಿಕ್ಕದೆ ಮಾಣ್ಬನೆ? ಮಡಿವಾಳ ತಂದೆ.