ಗುರುಪಾದೋದಕದಿಂದ ಸ್ಥೂಲ ದೇಹಶುದ್ಧಿ;
ಕ್ರಿಯಾಪಾದೋದಕದಿಂದ ಸೂಕ್ಷ್ಮ ದೇಹಶುದ್ಧಿ;
ಜ್ಞಾನಪಾದೋದಕದಿಂದ ಕಾರಣ ದೇಹಶುದ್ಧಿ;
ಗುರುಪಾದೋದಕದಿಂದ ಇಷ್ಟಲಿಂಗ ಸಂಬಂಧ;
ಕ್ರಿಯಾಪಾದೋದಕದಿಂದ ಪ್ರಾಣಲಿಂಗ ಸಂಬಂಧ;
ಜ್ಞಾನಪಾದೋದಕದಿಂದ ಭಾವಲಿಂಗ ಸಂಬಂಧ.
ಅದು ಕಾರಣ, ಪಾದೋದಕವೆ ಪ್ರತ್ಯಕ್ಷ ಪರಬ್ರಹ್ಮ ನೋಡಾ
ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Gurupādōdakadinda sthūla dēhaśud'dhi;
kriyāpādōdakadinda sūkṣma dēhaśud'dhi;
jñānapādōdakadinda kāraṇa dēhaśud'dhi;
gurupādōdakadinda iṣṭaliṅga sambandha;
kriyāpādōdakadinda prāṇaliṅga sambandha;
jñānapādōdakadinda bhāvaliṅga sambandha.
Adu kāraṇa, pādōdakave pratyakṣa parabrahma nōḍā
kapilasid'dhamallikārjunā.