ಗುರುಪಾದೋದಕವಿಲ್ಲದಲ್ಲಿ, ಜಂಗಮಪಾದೋದಕವಿಲ್ಲದಲ್ಲಿ,
ಪ್ರಣವೋದಕದಿಂದಂಗಸ್ನಾನ ಮಾಳ್ಪುದಯ್ಯಾ.
ಪ್ರಣವೋದಕದಿಂದ ಲಿಂಗಸ್ನಾನ ಲಿಂಗಾಭಿಷೇಕ ಮಾಳ್ಪುದಯ್ಯಾ.
ಗುರುವಿನಲ್ಲಿ ಗುರುಪಾದೋದಕವುಂಟು,
ಲಿಂಗಪಾದೋದಕವುಂಟು, ಜಂಗಮಪಾದೋದಕವುಂಟು.
ಲಿಂಗದಲ್ಲಿ ಗುರುಪಾದೋದಕವಿಲ್ಲ,
ಜಂಗಮ ಪಾದೋಕವಿಲ್ಲದ ನಿಮಿತ್ತ
ಜಂಗಮವ ಬರಿಸಿಕೊಂಡು ಕ್ರೀಯ ಮಾಳ್ಪ ಭಕ್ತನ ಪಾದಕ್ಕೆ
ನಮೋ ನಮೋ ಎಂಬೆ,
ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Gurupādōdakavilladalli, jaṅgamapādōdakavilladalli,
praṇavōdakadindaṅgasnāna māḷpudayyā.
Praṇavōdakadinda liṅgasnāna liṅgābhiṣēka māḷpudayyā.
Guruvinalli gurupādōdakavuṇṭu,
liṅgapādōdakavuṇṭu, jaṅgamapādōdakavuṇṭu.
Liṅgadalli gurupādōdakavilla,
jaṅgama pādōkavillada nimitta
jaṅgamavisikoṇḍu krīya māḷpa bhaktana pādakke
namō namō embe,
kapilasid'dhamallikārjunā.