Index   ವಚನ - 565    Search  
 
ತನ್ನ ಮರೆದು ನಿನ್ನ ರೂಪಾದವರ ನಿನ್ನವರೆ ಪ್ರಾಣವೆಂದೆಂಬವರ ನಿನ್ನವರೆ ಮೂರ್ತಿಧ್ಯಾನದಲ್ಲಿ ಮೂರ್ಛೆವೋದವರ ನಿನ್ನವರೆ ಕೀರ್ತಿಸುವವರ ನೀನೆಂದೆ ನಿನ್ನವರನರ್ಚಿಸುವವ[ರ] ಸಂಗಸುಖದೊಳಗೆ ಎನ್ನನಿರಿಸಯ್ಯಾ ನಿಮ್ಮ ಧರ್ಮ, ಅನಂಗವಿದಾರಣ, ಕಪಿಲಸಿದ್ಧಮಲ್ಲಿಕಾರ್ಜುನಾ.