•  
  •  
  •  
  •  
Index   ವಚನ - 567    Search  
 
ತನುಗುಣದ ಪಾತ್ರೆಯಲಿ ತವಕಿಸುವ ಭೇದವನು ಅನುನಯದ ಮಲತ್ರಯದ ದುರ್ವಾಕ್ಯವನು ಘನತರದ ಸುದ್ದಿಯನು ಐದೈದುವೊಂದಾಗಿ ತನುಗುಣವನತಿಗಳೆದು ಪ್ರಾಪಂಚಿಕಾತತ್ವದಿಂದತ್ತ ಮತ್ತೆ ತ್ವಮಸಿಯಾಗಿ ಭಕ್ತಿ ಕಾರಣ ಲೋಕರೂಪನಾಗಿ ಏಕೈಕ ಸಂಬಂಧಿ ಆಕಾರ ನಿರ್ವಿಘ್ನ ಆನಂದದವ್ಯಯದ ಅಂತ್ಯದಲ್ಲಿ ಅವ್ವೆಯ ಮುಖಕಮಲ ಐಯನಜಾತಸ್ಯ ಸಂಯೋಗಕದು ಶುದ್ಧ ಮುಗ್ಧನಾಗಿ ಮೂರ ಮತ್ತೊಂದೆಂದು ಒಂದು ಮೂರರ ತೃಪ್ತಿ ಸಂದಳಿದೆ ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Tanuguṇada pātreyali tavakisuva bhēdavanu anunayada malatrayada durvākyavanu ghanatarada suddiyanu aidaiduvondāgi tanuguṇavanatigaḷedu prāpan̄cikātatvadinda matte tvamasiyāgi bhakti kāraṇa lōkarūpanāgi ēkaika sambandhi ākāra nirvighna ānandadavyayada antyadalli avveya mukhakamala aiyanajātasya sanyōgakadu śud'dha mugdhanāgi mūra mattondendu ondu mūrara tr̥pti sandaḷide kapilasid'dhamallikārjunā.