ವಚನ - 568     
 
ತನುಗುಣ ಪ್ರಪಂಚಿಕವ ಹೊದ್ದ ಬಸವಣ್ಣ; ಸೀಮಾ ಸಂಬಂಧಿಗಳಲ್ಲಿ ನಿಲ್ಲ ಬಸವಣ್ಣ; ಎರಡೆಂಟೆಂದರಿಯ ಬಸವಣ್ಣ; ಅಂಗಮುಖವೆಲ್ಲವು ಲಿಂಗಮುಖವಾಗಿಪ್ಪ ಬಸವಣ್ಣ; ಪ್ರಾಣವೆಲ್ಲವು ಲಿಂಗಪ್ರಾಣವಾಗಿಯೆ ಸಮನಿಸುವ ಬಸವಣ್ಣ; ಅನರ್ಪಿತವಧಾನಂಗಳ ಭೇದವನು ಕಾಯದ ಕರದಿಂದರ್ಪಿಸದೆ, ಸ್ವಾನುಭಾವ ಸಮ್ಯಕ್ ಜ್ಞಾನ ಕರಂಗಳಿಂದರ್ಪಿಸುವ ಬಸವಣ್ಣ; ನಿತ್ಯ ಪ್ರಸಾದವ ಕೊಂಬ ಬಸವಣ್ಣ. ಕಪಿಲಸಿದ್ಧಮಲ್ಲಿಕಾರ್ಜುನಯ್ಯನೆಂಬ ಪರಸಮಯವನೊಳಕೊಂಡಿಪ್ಪ ಬಸವಣ್ಣನ ಪರಿ ಇಂತುಟು.