ತನುಗುಣಾದಿಗಳೆಲ್ಲ ನೀ ಮಾಡಲಾದವು.
ಮನ ಪ್ರಾಣ ನೆನಹಿನ ಸಂಗಮದಲಿ ಸಮನಿಸಬಲ್ಲನೆ ಅಯ್ಯ?
ಸ್ಥೂಲ ಸೂಕ್ಷ್ಮ ಕಾರಣವೆಂಬವು
ನೀ ಮಾಡಲಾದುವಲ್ಲದೆ ನಿಮ್ಮ ಧರ್ಮ.
ನಿನ್ನ ಮೀರಿ ಅಧಿಕವುಂಟೆ? ಸರ್ವರಲ್ಲಿ ಸಿದ್ಧನು.
ಎನ್ನ ಹೊದ್ದಿಯೂ ಹೊದ್ದದಂತಿರೆ,
ಎನ್ನ ಸರ್ವಾಂಗದಲ್ಲಿ ನೀನೆಯಾಗಿ ತೋರಯ್ಯಾ!
[ಅನಂಗ]ವಿದಾರಣ ಕಪಿಲಸಿದ್ಧಮಲ್ಲಿಕಾರ್ಜುನಾ,
ನಿಮ್ಮ ಧರ್ಮ! ನಿಮ್ಮ ಧರ್ಮ!