ವಚನ - 601     
 
ತಾತ್ಪರಿಯ ವರ್ಮ ಕಳೆಯನರಿತು ಶುದ್ಧ ಸಿದ್ಧ ಪ್ರಸಿದ್ಧದಲ್ಲಿ ಪ್ರಭಾವಮುಖದಲ್ಲಿಪ್ಪವರ ಅವರನೇನೆಂಬೆ? ಅವರ ಸಿದ್ಧರೆಂಬೆನೋ? ಅವರ ಶುದ್ಧರೆಂಬೆನೋ? ಅವರ ಪ್ರಸಿದ್ಧರೆಂಬೆನೋ? ಅವರ ಸರ್ವಾಂಗ ಸನುಮತರೆಂಬೆ ಕಾಣಾ ಕಪಿಲಸಿದ್ಧಮಲ್ಲಿಕಾರ್ಜುನಾ.