Index   ವಚನ - 655    Search  
 
ಧನಕ್ಕೆ ಮನಕ್ಕೆ ಕಾಮಿಸದಿರು ಎನ್ನಯ್ಯಾ, ನಿಮ್ಮ ನೆನೆದು ನಿಮ್ಮ ನೋಡಿ ನಿಮ್ಮ ತೋರಿ ನಿಮ್ಮ ಚಿತ್ತದಲ್ಲಿರಿಸಾ. ಸಲೆ ನಿಮ್ಮ ಬೇಡುವ ಮನ, ದಾಸಿಮನ ಮಾಡದಿರೆನ್ನ [ಕಪಿಲಸಿದ್ಧ] ಮಲ್ಲಿಕಾರ್ಜುನಯ್ಯ ತಂದೆ.