ನಟ್ಟಡವಿಯೊಳಗೆ ಇರುಳು-ಹಗಲೆನ್ನದೆ
ಅಪ್ಪಾ! ಅಯ್ಯಾ! ಎಂದು ನಾನರಸುತ್ತ ಹೋದಡೆ,
`ನಾನಿದ್ದೇನೆ ಬಾ ಮಗನೆ' ಎಂದು ಕರೆದು, ಎನ್ನ ಕಂಬನಿದೊಡೆದು,
ತನ್ನ ನಿಜವ ತೋರಿದ ಪಾದವಿಂದೆನ್ನಲ್ಲಿಗೆ ನಡೆದುಬಂದಡೆ
ನಾನರಿಯದೆ ಮರುಳುಗೊಂಡೆಹೆನೆಂದು
ಎನ್ನ ಮನದೊಳಗೆಚ್ಚರ ಮಾಡಿದೆ.
ಆತನನರಸಿಕೊಂಡು ಬಂದೆನ್ನ ಹೃದಯದಲಿಂಬಿಟ್ಟುಕೊಂಬೆ,
ಎನ್ನ ಕಪಿಲಸಿದ್ಧಮಲ್ಲಿಕಾರ್ಜುನನ.
Art
Manuscript
Music
Courtesy:
Transliteration
Naṭṭaḍaviyoḷage iruḷu-hagalennade
appā! Ayyā! Endu nānarasutta hōdaḍe,
`nāniddēne bā magane' endu karedu, enna kambanidoḍedu,
tanna nijava tōrida pādavindennalu naḍedubandaḍe
nānariyade maruḷugoṇḍ'̔ehenendu
enna manadoḷageccara māḍide.
Ātananarasikoṇḍu bandenna hr̥dayadalimbiṭṭukombe,
enna kapilasid'dhamallikārjunana.