ವಚನ - 717     
 
ನೀಲಕಂಧರಗಿರಿಯ ಮೇಲಿಪ್ಪ ನೀನಲ್ಲ. ಆಲಸ್ಯವಿಲ್ಲದೆ ಅತಿಶಯದಲಿ ಬಾಲ ಕನಸಿನ ಲೀಲೆಯಾಯಿತ್ತು ಭಕ್ತಿಯ ಹೇಳುವಡೆ ಆರಿಗೆಯು ಉಪಮೆಯಿಲ್ಲ. ಭಾಳನಯನದ ಮೇಲೆ ಬಾಲೆಯರ ಸಂಯೋಗ. ಈರಾರು ಬೆಳಕವರ ಇಕ್ಕೆಲದಲ್ಲಿ. ಸ್ಥೂಲ ಸೂಕ್ಷ್ಮದಲ್ಲಿ ಮೇಲಿಪ್ಪ ಘನವದರ ಈರೇಳು ಘಟಿಸುವ ಲೋಕಕ್ಕೆ ದಿಕ್ಕರಿಗಳೆಂಟಾಗಿ ಬೆಟ್ಟವೆಂಟಾಗಿರ್ಪ ಘನತರದ ನಿಜವ ಬಲ್ಲವರಾರು? ಹೊಲಬನರಿವವರಾರು ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ನಿಜಭಕ್ತಿಯ?