ನುಡಿಹಿಡಿದು ತಾರ್ಕಿಕರಂತೆ ತರ್ಕಿಸುವಾತ ನಾನಲ್ಲ.
ಆಡುವ ಮಾತಿಗೆ ಈಡ ಮಾಡುವ ನುಡಿಯಲ್ಲಿ
ವಾಕ್ಪಟುತನವು ನಿಜವಲ್ಲ.
ನಡೆಯುವ ನಂದಿ ಕುಂಟುವುದುಂಟು,
ಹೋಗುವ ಮನುಜ ಎಡಹುವುದುಂಟು,
ಮಾತಾಡುವ ಶರಣ ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ
ತಪ್ಪಿದಡೆ ತಪ್ಪಲ್ಲ ಕೇಳಾ ಪ್ರಭುವೆ.
Transliteration Nuḍ'̔ihiḍidu tārkikarante tarkisuvāta nānalla.
Āḍuva mātige īḍa māḍuva nuḍiyalli
vākpaṭutanavu nijavalla.
Naḍeyuva nandi kuṇṭuvuduṇṭu,
hōguva manuja eḍahuvuduṇṭu,
mātāḍuva śaraṇa kapilasid'dhamallikārjunanalli
tappidaḍe tappalla kēḷā prabhuve.