ವಚನ - 781     
 
ಪ್ರಾಪಂಚಿಕ ಸೀಮೆಯ ಮೀರಿದ ಭೇದವ, ಆನಂದ ಸ್ಥಾನದ ಆಂದೋಳವ, ಆರರ ಕರಣಂಗಳ ತೋರುವ ಅಜ್ಞಾನವ ಮೀರಿದೆ ಮಧ್ಯಮದಲ್ಲಿ ಕಪಿಲಸಿದ್ಧಮಲ್ಲಿಕಾರ್ಜುನಾ.