•  
  •  
  •  
  •  
Index   ವಚನ - 818    Search  
 
ಬೀಜ ವೃಕ್ಷದಂತೆ ನೀನಿಪ್ಪೆಯಯ್ಯಾ ನಿರಾಕಾರವೆ ಮೂರ್ತಿಯಾಗಿ, ಮೂರ್ತಿಯೆ ನಿರಾಕಾರವಾಗಿ. ಇಂತಿವೆಲ್ಲವನತಿಗಳೆದು ಬಯಲಾಗಿಪ್ಪೆಯಯ್ಯಾ ನೀನು. ಎನ್ನ ಕಪಿಲಸಿದ್ಧಮಲ್ಲಿಕಾರ್ಜುನದೇವಯ್ಯಾ.
Transliteration Bīja vr̥kṣadante nīnippeyayya nirākārave mūrtiyāgi, mūrtiye nirākāravāgi. Intivellavanatigaḷedu bayalāgippeyayya nīnu. Enna kapilasid'dhamallikārjunadēvayya.