ಭಕ್ತರ ನುಡಿ ಅಭವನಲ್ಲದೆ
ಅನ್ಯವ ನುಡಿಯದು, ಅನ್ಯಕೆ ಎಡೆಯಾಗದು.
ಆತನ ಶ್ರೋತ್ರ ತ್ವಕ್ಕು ನೇತ್ರ ಜಿಹ್ವೆ ಘ್ರಾಣವೆಂಬ
ಪಂಚೇಂದ್ರಿಯಂಗಳು ಆತನ ಐದು ಮುಖಂಗಳಯ್ಯಾ!
ಆತ ಪತಿ, ಆತ ಸತಿ:
ಆತನ ಕರಣಂಗಳೆಲ್ಲವು ಈಶನ ಉಪಕರಣಂಗಳು.
ಆತನ ಕರಣಂಗಳೆಲ್ಲವು ಈಶನ ಹೇಮಶೈಲ.
ಆತ ನಿತ್ಯವೂ ಲಿಂಗಾರ್ಚನೆಯ ಮಾಡುವ ಕಾರಣ,
ಆತಂಗೊಂದೂ ಇದಿರಿಲ್ಲ;
ಆತ ಲೋಕಕ್ಕೆ ಉಪದೇಶಿಕ,
ಕಪಿಲಸಿದ್ಧಮಲ್ಲಿಕಾರ್ಜುನಯ್ಯನ
ಕೂಡಿದ ತಾತ್ಪರ್ಯ ಭಕ್ತಿ.
Transliteration Bhaktara nuḍi abhavanallade
an'yava nuḍiyadu, an'yake edeyāgadu.
Ātana śrōtra tvakku nētra jihve ghrāṇavemba
pan̄cēndriyaṅgaḷu ātana aidu mukhaṅgaḷayya!
Āta pati, āta sati:
Ātana karaṇaṅgaḷellavu īśana upakaraṇagaḷu.
Ātana karaṇaṅgaḷellavu īśana hēmaśaila.
Āta nityavū liṅgārcaneya māḍuva kāraṇa,
ātaṅgondū idilla;
āta lōkakke upadēśika,
kapilasid'dhamallikārjunayyana
kūḍida tātparya bhakti.