Index   ವಚನ - 865    Search  
 
ಮನನತ್ರಾಣರೂಪವಾದ ಚಿತ್ತೇ, ಮಂತ್ರವಲ್ಲದೆ ಬೇರೆ ಮಂತ್ರಗಳುಂಟೆ ಅಯ್ಯಾ? ಸರ್ವಮಂತ್ರಮಾತೆ ಪಂಚಾಕ್ಷರಿಯೆ ತಾನಾಗಿ, ಕಪಿಲಸಿದ್ಧಮಲ್ಲಿಕಾರ್ಜುನಂಗೆ ಅಂಗವಾದ ಚಿತ್ತೆ, ಪ್ರಣಯಮೂಲವಾದ ಮಂತ್ರವಯ್ಯಾ.